ಭಾರತೀಯ ಸ್ಟೇಟ್ ಬ್ಯಾಂಕ್
ಭಾರತದ ಅತಿ ದೊಡ್ಡ ವಾಣಿಜ್ಯ ಬ್ಯಾಂಕು, ಭಾರತೀಯ ಸ್ಟೇಟ್ ಬ್ಯಾಂಕ್ 2005 ರಲ್ಲಿ ಸ್ವರ್ಣಮಹೋತ್ಸವವನ್ನೂ 200ನೇ ವರ್ಷವನ್ನೂ ಒಟ್ಟಿಗೆ ಆಚರಿಸುತ್ತಿದೆ.  ಭಾರತೀಯ ಸ್ಟೇಟ್ ಬ್ಯಾಂಕಿಗೆ ಎರಡು ಶತಮಾನಗಳ ದೀರ್ಘವೂ  ರೋಚಕವೂ ಆದ ಇತಿಹಾಸವಿದೆ.  1806ರ ಜೂನ್ 2 ರಂದು ಕಲ್ಕತ್ತಾ ಬ್ಯಾಂಕ್ (ಬ್ಯಾಂಕ್ ಆಫ್ ಕಲ್ಕತ್ತಾ) ಸ್ಥಾಪಿತವಾಗಿ 1809ರಿಂದ ಬಂಗಾಳ ಬ್ಯಾಂಕ್ (ಬ್ಯಾಂಕ್ ಆಫ್ ಬೆಂಗಾಲ್) ಎಂಬ ಹೆಸರಿನಲ್ಲಿ ಮುಂದುವರೆಯಿತು. ಬಂಗಾಳ ಪ್ರಾಂತದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಚೆನ್ನಾಗಿ ಬಲ್ಲವರಾಗಿದ್ದ ಸರ್ ಹೆನ್ರಿ ಜಾರ್ಜ್ ಟಕ್ಕರ್ ಎಂಬ ಆಂಗ್ಮ ಸರಕಾರದ ಹಿರಿಯ ಅಧಿಕಾರಿಯೇ ಬಂಗಾಳ ಬ್ಯಾಂಕಿನ ಸ್ಥಾಪನೆಗೆ ಕಾರಣರಾದ ಮಹನೀಯ.  1840 ರಲ್ಲಿ ಬಾಂಬೆ ಬ್ಯಾಂಕ್ (ಬ್ಯಾಂಕ್ ಆಫ್ ಬಾಂಬೆ) ಮತ್ತು 1843 ರಲ್ಲಿ ಮದ್ರಾಸ್ ಬ್ಯಾಂಕ್(ಬ್ಯಾಂಕ್ ಆಫ್ ಮದ್ರಾಸ್ ಗಳು ಅಸ್ತಿತ್ವಕ್ಕೆ ಬಂದವು. ಈ ಎರಡೂ ಬ್ಯಾಂಕುಗಳೂ ಬಂಗಾಳ ಬ್ಯಾಂಕಿನಂತೆಯೇ ರೂಪುಗೊಂಡವು. 1861ರಿಂದಲೇ ಬಂಗಾಳ ಬ್ಯಾಂಕು ಸರ್ಕಾರದ ಅಭಿಕರ್ತ ಸಂಸ್ಥೆಯಾಗಿ(ಏಜೆಂಟ್) ಕಾರ್ಯನಿರ್ವಹಿಸುತ್ತಿತ್ತು.  1861ರಿಂದ ಜಾರಿಗೆ ಬಂದ ಮೊದಲ ಒಪ್ಪಂದದಂತೆ 1.3.62ರಂದು ಬಂಗಾಳ ಬ್ಯಾಂಕು ಸರ್ಕಾರದ ಖಜಾನೆ ವ್ಯವಹಾರವನ್ನು ನಿರ್ವಹಿಸತೊಡಗಿತು. ಈ ಮೂರೂ ಬ್ಯಾಂಕುಗಳೂ ಆರಂಭವಾದ ದಿನದಿಂದಲೇ ತಮ್ಮದೇ ಆದ ಕರೆನ್ಸಿ ನೋಟುಗಳನ್ನೂ ಮುದ್ರಿಸು ತ್ತಿದ್ದವೆಂದರೆ ಅವುಗಳ ಪ್ರಭಾವವನ್ನು ಊಹಿಸಿಕೊಳ್ಳಬಹುದು. ಮುಂದೆ 1862ರಲ್ಲಿ ಸರ್ಕಾರಿ ನೋಟುಗಳು ಆರಂಭವಾಗುವವರೆಗೆ ಇವು ತಮ್ಮ ನೋಟುಗಳನ್ನು ಮುದ್ರಿಸುತ್ತಿದ್ದವು. 1862ರಲ್ಲಿ ಸರ್ಕಾರವು ಕಾಗದ ಕರೆನ್ಸಿ ಆರಂಭಿಸಿದಾಗ ಸರಕಾರದ ಪರ ವಾಗಿ ನೋಟುಗಳನ್ನು ಮುದ್ರಿಸುವ ಕಾರ್ಯವನ್ನೂ  ಬಂಗಾಳ ಬ್ಯಾಂಕ್ ನಿರ್ವಹಿಸಲಾರಂಭಿಸಿತು. 1866ರ ಹೊತ್ತಿಗೆ ಈ  ಈ ಕಾರ್ಯವನ್ನು ಸರ್ಕಾರವೇ ಕೈಗೊಂಡಿತಾದರೂ ಬಂಗಾಳ ಬ್ಯಾಂಕು ಸರಕಾರದ ಬ್ಯಾಂಕರನಾಗಿ ಮುಂದುವರೆಯಿತಲ್ಲದೆ ಸಾರ್ವಜನಿಕ ಋಣ ವ್ಯವಸ್ಥಾಪನೆಯ ಜವಾಬ್ದಾರಿಯನ್ನೂ ತೆಗೆದುಕೊಂಡಿತು. 

1876 ರಲ್ಲಿ ಜಾರಿಗೆ ಬಂದ ಪ್ರೆಸಿಡೆನ್ಸಿ ಬ್ಯಾಂಕುಗಳ ಅಧಿನಿಯಮಕ್ಕೆ ಇವು ಒಳಪಟ್ಟು ಪ್ರೆಸಿಡೆನ್ಸಿ ಬ್ಯಾಂಕುಗಳು ಎಂದು ಹೆಸರಾದವು. ಈ ಬ್ಯಾಂಕುಗಳನ್ನು ಒಗ್ಗೂಡಿಸಲು 1920ರಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಅಧಿನಿಯಮವನ್ನು ಜಾರಿಗೆ ತರಲಾಯಿತು.  ಆಗ ಅಸ್ತಿತ್ವದಲ್ಲಿದ್ದ ¨ಂಗಾಳ ಬ್ಯಾಂಕ್(25 ಶಾಖೆಗಳು), ಬಾಂಬೆ ಬ್ಯಾಂಕ್(18 ಶಾಖೆಗಳು) ವiತ್ತು ಮದ್ರಾಸ್ ಬ್ಯಾಂಕ್ (26 ಶಾಖೆಗಳು) ಸೇರಿ 1921 ರ ಜನವರಿ 27ರಿಂದ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ಕಾರ್ಯಾರಂಭವಾಯಿತು.  ಈ 69 ಶಾಖೆಗಳ ಠೇವಣಿಗಳು ವiತ್ತು ಮುಂಗಡಗಳು 86.29 ಮತ್ತು 36.11 ಕೋಟಿ ರೂಪಾಯಿಗಳಷ್ಟಿತ್ತು (31.12.1920). 

ಇಂಪೀರಿಯಲ್ ಬ್ಯಾಂಕಿಗೆ ಮೊದಲ ಐದು ವರ್ಷಗಳಲ್ಲೇ 100 ಶಾಖೆಗಳನ್ನು ತೆರೆಯುವ ಯೋಜನೆಯನ್ನು ಜಾರಿಗೆ ತರುವುದು ಕಷ್ಟವಾಗಿತ್ತು.  1923ರ ಹೊತ್ತಿಗೆ ಅಲಯನ್ಸ ಬ್ಯಾಂಕ್ ಆಫ್ ಸಿಮ್ಲಾ  (ಪ್ರಧಾನ ಕಚೇರಿ ಸಿಮ್ಲಾ -ಸ್ಥಾಪನೆ 1923) ದಿವಾಳಿಯಾದಾಗ, ಅದರ ಎಲ್ಲ ಶಾಖೆಗಳನ್ನು ಸಿಬ್ಬಂದಿ ಸಹಿತವಾಗಿ ಇಂಪೀರಿಯಲ್ ಬ್ಯಾಂಕು ವಹಿಸಿುಕೊಂಡಿತು.

1935 ರಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪಿತವಾಯಿತು.  ಇಂಪೀರಿಯಲ್ ಬ್ಯಾಂಕು ಸರ್ಕಾರದ ಖಾತಯನ್ನೂ ಸಾರ್ವಜನಿಕ ಋಣದ ನಿರ್ವಹಣೆಯನ್ನೂ ರಿಸರ್ವ್ ಬ್ಯಾಂಕಿಗೆ ಹಸ್ತಾಂತರಿಸಿತು.  

1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಆರ್ಥಿಕ ಯೋಜನೆಗಳ ಶಕ ಆರಂಭವಾಯಿತು.   ಕೈಗಾರಿಕಾಭಿವೃದ್ಧಿ, ಬೃಹತ್ ಜಲಾಶಯಗಳ ನಿರ್ಮಾಣ, ದೈತ್ಯ ಉಕ್ಕಿನ ಸ್ಥಾವರಗಳು, ಶಾಖೋತ್ಪನ್ನ ವಿದ್ಯುತ್ ಯೋಜನೆಗಳು ಆರಂಭವಾಗಿ ಅಲ್ಲಿಯವರೆಗೆ ಇದ್ದ ಸಾಂಪ್ರದಾಯಿಕ ಕೃಷಿ ಮತ್ತು ವ್ಯಾಪಾರಾಧಾರಿತ ಅರ್ಥವ್ಯವಸ್ಥೆಯ ದಿಶೆಯೇ  ಬದಲಾಯಿತು.  ಅರ್ಥವ್ಯವಸ್ಥೆಯ ಈ ರೂಪ ಪರಿವರ್ತನೆಯಿಂದಾಗಿ ಬ್ಯಾಂಕುಗಳು ವಿಶೇಷ ಪಾತ್ರ ವಹಿಸುವುದು ಅಗತ್ಯವಾಯಿತು. ಕೈಗಾರಿಕೆ ಮತ್ತು ಕೃಷಿ ಎರಡನ್ನೂ ಜತೆ ಜತೆಗೇ ಅಭಿವೃದ್ಧಿ ಪಡಿಸಲು ನೆರವಾಗುವಂಥ ಬ್ಯಾಂಕೊಂದರ ಅವಶ್ಯಕತೆ ಇತ್ತು.  ಈ ಬಗ್ಗೆ ಪರಿಶೀಲಿಸಲು ಭಾರತ ಸರಕಾರವು 1947 ರಲ್ಲಿ ಶ್ರೀ. ಎ.ಡಿ. ಗೋರ್ವಾಲಾ ಎಂಬ ಐ.ಎ.ಎಸ್. ಅಧಿಕಾರಿಯ ನೇತೃತ್ವದಲ್ಲಿ ಅಖಿಲ ಭಾರತ ಗ್ರಾಮೀಣ ಉದರಿ ಸರ್ವೇಕ್ಷಣ ಸಮಿತಿಯನ್ನು ನೇಮಿಸಿತು.  ಈ ಸಮಿತಿಯ ವರದಿಯ ಫ¯ವಾಗಿ ಇಂಪೀರಿಯಲ್ ಬ್ಯಾಂಕಿನ ಎಲ್ಲ ಶಾಖೆಗಳನ್ನೂ ತೆಗೆದುಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ರೂಪಿಸಲು 1954 ರ ಡಿಸೆಂ¨ರ್ 20 ರಂದು ನಿರ್ಧರಿಸಿತು. 
1955 ರಲ್ಲಿ ಸಂಸತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿನಿಯಮವನ್ನು ಜಾರಿಗೆ ತಂದಿತು.  ಇಂಪೀರಿಯಲ್ ಬ್ಯಾಂಕಿನ ಎಲ್ಲ ಶಾಖೆಗಳನ್ನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಭಾರತೀಯ ಸ್ಟೇಟ್ ಬ್ಯಾಂಕ್) ವಹಿಸಿಕೊಂಡಿತು.   ಭಾರತೀಯ ಸ್ಟೇಟ್ ಬ್ಯಾಂಕಿನ ಸ್ಥಾಪನೆಯಾದಾಗ ಅದರ ಪಾವತಿಯಾದ ಬಂಡವಾಳ ರೂ.5,62,50,000/- ಇತ್ತು.  ಆಗ 15 ಸಾವಿರ ಮಂದಿ ಉದ್ಯೋಗಿಗಳನ್ನು ಹೊಂದಿದ್ದ ಬ್ಯಾಂಕಿನಲ್ಲಿ  31.12.1955 ಕ್ಕೆ ಅಂತ್ಯವಾದ ವರ್ಷದಲ್ಲಿ ಠೇವಣಿ ವiತ್ತು ಮುಂಗಡಗಳು ಕ್ರಮವಾಗಿ 226 ಮತ್ತು 106 ಕೋಟಿ ರೂ. ಇದ್ದು 68 ಲಕ್ಷ ರೂ. ಲಾಭ ಗಳಿಸಿತ್ತು.
ಹೀಗೆ ಒಂದು ಹೊಸ ಸಾಮಾಜಿಕ ಉದ್ದೇಶದಿಂದ ಆರಂಭವಾದ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಅಗಾಧವಾಗಿ ಬೆಳೆದು ಅರ್ಧಶತಮಾನದ ಅರ್ಥಪೂರ್ಣವೂ ಮಹತ್ವವೂ ಆದ ಸೇವೆಯನ್ನು ಪೂರೈಸಿ ಹಣಕಾಸು ಕ್ಷೇತ್ರದಲ್ಲಿ ಅಂತರ ರಾಷ್ಟ್ರೀಯ ಗುಣ ಮಟ್ಟದ ಸೇವೆಗಳನ್ನು ನೀಡುತ್ತಾ ಅರ್ಥವಲಯದ ವಿವಿಧ ವರ್ಗಗಳಿಗೆ ಸೇರಿದ ಲಕ್ಷಾಂತರ ಗ್ರಾಹಕರನ್ನು ಹೊಂದಿ ಮುನ್ನಡೆದಿದೆ.  ರಿಸರ್ವ್ ಬ್ಯಾಂಕಿನ ಸೋದರ, ಬ್ಯಾಂಕುಗಳ ಹಿರಿಯಣ್ಣ, ಸರಕಾರದ ಬ್ಯಾಂಕರ್ ಮುಂತಾಗಿ ಹೆಸರಾದ ಸ್ಟೇಟ್ ಬ್ಯಾಂಕ್ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಸದಾ ಮುಂದು.  ಸರಕಾರಕ್ಕೆ ಸಂಕಷ್ಟ ಪರಿಸ್ಥಿತಿ ಎದುರಾದಾಗ ಸ್ಟೇಟ್ ಬ್ಯಾಂಕ್ ಅದಕ್ಕೆ ಬೆಂಬಲವಾಗಿ ನಿಂತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದಕ್ಕಿರುವ ಒಳ್ಳೆಯ ಹೆಸರಿನ ನೆರವಿನಿಂದ ರಿಸರ್ಜೆಂಟ್ ಇಂಡಿಯಾ ಬಾಂಡುಗಳ ಮೂಲಕ ಅಪಾರ ಮೊತ್ತದ ಹಣ ಸಂಗ್ರಹಿಸಿ ಸರಕಾರಕ್ಕೆ ನೆರವಾದುದು ಒಂದು ಉದಾಹರಣೆ.
1959 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಸಬ್ಸಿಡಿಯರಿ ಬ್ಯಾಂಕುಗಳ) ಅಧಿನಿಯಮವನ್ನು ರಚಿಸಿ ಆಗ ಹಿಂದಿನ ರಾಜಮನೆತನಗಳ ಅಧೀನದಲ್ಲಿದ್ದ ಎಂಟು ಬ್ಯಾಂಕುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕಿನ ಸಹವರ್ತಿ ಸಂಸ್ಥೆಗಳನ್ನಾಗಿ ಮಾಡಲಾಯಿತು.  ಅವುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಜೈಪುರ್ ಇವೆರಡನ್ನು ಒಗ್ಗೂಡಿಸಿ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್ ಎಂದು ಹೆಸರಿಸಿಲಾಯಿತು.  ಈಗ ಈ ಏಳು ಬ್ಯಾಂಕುಗಳು ಭಾರತೀಯ ಸ್ಟೇಟ್ ಬ್ಯಾಂಕಿನ ಸಹವರ್ತಿ ಬ್ಯಾಂಕುಗಳೆನಿಸಿವೆ.  

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್
ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ 
ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ 
ಸ್ಟೇಟ್ ಬ್ಯಾಂಕ್ ಆಫ್ ಬಕಾನೇರ್ ಮತ್ತು ಜೈಪುರ್ 
ಸ್ಟೇಟ್ ಬ್ಯಾಂಕ್ ಆಫ್ ಇಂದೂರ್ 

ಭಾರತೀಯ ಸ್ಟೇಟ್ ಬ್ಯಾಂಕ್ ಈ ಏಳು ಬ್ಯಾಂಕುಗಳ ಪೈಕಿ ಮೊದಲ ಮೂರರ  ಪೂರ್ಣ ಷೇರು ಬಂಡವಾಳದ ಸ್ವಾಮ್ಯ ಹೊಂದಿದ್ದು ಉಳಿದ ನಾಲ್ಕು ಬ್ಯಾಂಕುಗಳಲ್ಲಿ ಅತಿದೊಡ್ಡ ಷೇರುದಾರ ಕಂಪನಿಯಾಗಿದೆ. 
 
ಆಡಳಿತ ವ್ಯವಸ್ಥೆ : ಸ್ಟೇಟ್ ಬ್ಯಾಂಕಿನ ಅಧಿಕೃತ ಬಂಡವಾಳ ರೂ.1000 ಕೋಟಿ. ನೀಡಿದ ಮತ್ತು ಪಾವತಿಯಾದ ಬಂಡವಾಳ ರೂ.526.3 ಕೋಟಿ. ಅತಿದೊಡ್ಡ ಪಾಲುದಾರ ಭಾರತದ ರಿಸರ್ವ್ ಬ್ಯಾಂಕ್ [ಬಂಡವಾಳದಲ್ಲಿ ಶೇ.59.5 ಪಾಲು]. ಭಾರತೀಯ ಜೀವ ವಿಮಾ ಸಂಸ್ಥೆ ಮತ್ತು ಹಿಂದೆ ಇಂಪೀರಿಯಲ್ ಬ್ಯಾಂಕಿನಲ್ಲಿ ಷೇರುದಾರರಾಗಿದ್ದ ಅನೇಕರು, ಸಹಸ್ರಾರು ಸಿಬ್ಬಂದಿ ಸದಸ್ಯರೂ ಸೇರಿದಂತೆ ಸಾರ್ವಜನಿಕರು ಈ ಸಂಸ್ಥೆಯ ಷೇರುದಾರರು.  ಬ್ಯಾಂಕಿನ ಅಧ್ಯಕ್ಷರು ವiತ್ತು ಇಬ್ಬರು ವ್ಯವಸ್ಥಾಪಕ ನಿರ್ದೇಶಕರನ್ನು ರಿಸರ್ವ್ ಬ್ಯಾಂಕಿನ ಸಲಹೆಯ ಮೇರೆಗೆ ಭಾರತ ಸರ್ಕಾರ ನೇಮಿಸುತ್ತದೆ.  ಇದರ ಜತೆಗೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಹಲವು ನಿರ್ದೇಶಕರು, ಷೇರುದಾರರಿಂದ ಚುನಾಯಿತರಾದ ಕೆಲವು ನಿರ್ದೇಶಕರು [ಸದ್ಯಕ್ಕೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರುಗಳನ್ನು ಸೇರಿಸಿ ಒಟ್ಟು 16 ನಿರ್ದೇಶಕರು]  ಇರುವ ಕೇಂದ್ರ ನಿರ್ದೇಶಕರ ಮಂಡಳಿ ಬ್ಯಾಂಕಿನ ಆಡಳಿತವನ್ನು ನಡೆಸುತ್ತದೆ. ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ ಮಂಡಳಿಗಳೂ ಇದ್ದು ಇವು ಕೂಡ ಆಯಾ ಪ್ರದೇಶಗಳ ಆವಶ್ಯಕತೆಗಳ ಕಡೆಗೆ ಗಮನ ಕೊಡುತ್ತವೆ.  ಬ್ಯಾಂಕಿನ ಬ್ಯಾಂಕಿನ ಕೇಂದ್ರ ಕಚೇರಿ ಮುಂಬಯಿಯಲ್ಲಿದ್ದು ದೇಶದ ಪ್ರಮುಖ ಕೇಂದ್ರಗಳಲ್ಲಿ 14 ಸ್ಥಳೀಯ ಪ್ರಧಾನ ಕಚೇರಿಗಳಿವೆ. ಬ್ಯಾಂಕಿನ ಕೇಂದ್ರೀಯ ಲೆಕ್ಕ ಕಚೇರಿಯು ಕೋಲ್ಕತಾದಲ್ಲೂ, ಇನ್ಸ್‍ಪೆಕ್ಷನ್ ಮತ್ತು ಆಡಿಟ್ ಇಲಾಖೆಯ ಕಚೇರಿ ಹೈದರಾಬಾದಿನಲ್ಲೂ ಇವೆ.  ಬ್ಯಾಂಕು ಅಗಾಧವಾದ ಅಂತರರಾಷ್ಟ್ರೀಯ ವ್ಯವಹಾರವನ್ನೂ ಹೊಂದಿದ್ದು ಅಂತರರಾಷ್ಟ್ರೀಯ ಬ್ಯಾಂಕಿಂಗ್ ವಿಭಾಗದ ಮುಖ್ಯ ಕಚೇರಿಗಳು ಮುಂಬೈ ಮತ್ತು ಕೋಲ್ಕತಾಗಳಲ್ಲಿವೆ. ಈ ಬ್ಯಾಂಕು ಸುಮಾರು 9050 ದೇಶೀಯ ಶಾಖೆಗಳು ಮತ್ತು 62 ವಿದೇಶೀ ಕಚೇರಿಗಳನ್ನು ಹೊಂದಿದೆ. 
ಬ್ಯಾಂಕಿನ ಸಾಂಸ್ಥಿಕ ರಚನೆಯು ಮುಖ್ಯವಾಗಿ ಕಂಪನಿ ಕೇಂದ್ರ ಮತ್ತು ನಾಲ್ಕು ವ್ಯವಹಾರ ಸಮೂಹ ಗಳನ್ನೊಳಗೊಂಡಿದೆ. ಕಾರ್ಪೊರೇಟ್ ಬ್ಯಾಂಕಿಂಗ್ ಸಮೂಹ, ರಾಷ್ಟ್ರೀಯ ಬ್ಯಾಂಕಿಂಗ್ ಸಮೂಹ ಅಂತರ ರಾಷ್ಟ್ರೀಯ ಬ್ಯಾಂಕಿಂಗ್ ಸಮೂಹ ಮತ್ತು ಸಹಯೋಗಿ ಮತ್ತು ಅನುವರ್ತಿ ಬ್ಯಾಂಕಿಂಗ್ ಸಮೂಹ ದೇಶಾದ್ಯಂತ ಇರುವ ಬ್ಯಾಂಕಿನ ಕಚೇರಿಗಳು ಮೊದಲ  ಎರಡು ವ್ಯವಹಾರ ಸಮೂಹಗಳಲ್ಲಿ ಸೇರುತ್ತವೆ.

ಕಾರ್ಪೊರೇಟ್ ಬ್ಯಾಂಕಿಂಗ್ ಸಮೂಹದಲ್ಲಿ ಐದು ಮುಖ್ಯ ವ್ಯವಹಾರ ಘಟಕಗಳಿವೆ: ಕಾರ್ಪೊರೇಟ್ ಖಾತೆಗಳ ಸಮೂಹ, ಪರಿಯೋಜನೆ ಹಣಕಾಸು ಸಮೂಹ, ಗುತ್ತಿಗೆ ಹಣಕಾಸು ಸಮೂಹ, ಮಧ್ಯಮ ಕಾರ್ಪೊರೇಟ್ ಸಮೂಹ  ಮತ್ತು ಒತ್ತಡ ಗ್ರಸ್ತ ಆಸ್ತಿಗಳ ನಿರ್ವಹಣೆ ಸಮೂಹ.  ಪರಿಯೋಜನೆ ಹಣಕಾಸು ವಿಭಾಗವು ದೇಶದ ಬೃಹತ್ ಉದ್ಯಮಗಳ ಹಣಕಾಸು ಅಗತ್ಯಗಳಿಗೆ ನೆರವಾಗುತ್ತದೆ.

ರಾಷ್ಟ್ರೀಯ ಬ್ಯಾಂಕಿಂಗ್ ಸಮೂಹದಲ್ಲಿ ವೃತ್ತ ಗಳೆಂದು ಕರೆಯಲಾದ 14 ಆಡಳಿತ ಘಟಕಗಳಿವೆ.  ಪ್ರತಿ ಆಡಳಿತ ಘಟಕದ ಕೇಂದ್ರ ಒಂದು ಸ್ಥಳೀಯ ಪ್ರಧಾನ ಕಚೇರಿ ಎನಿಸಿದ್ದು ಮುಖ್ಯ ಪ್ರಧಾನ ವ್ಯವಸ್ಥಾಪಕರು ಅದರ ಮುಖ್ಯಸ್ಥರಾಗಿರುತ್ತಾರೆ.  ಈ 14 ಸ್ಥಳೀಯ ಪ್ರಧಾನ ಕಚೇರಿಗಳು ರಾಜ್ಯಗಳ ರಾಜಧಾನಿಗಳಲ್ಲಿದ್ದು ಅವುಗಳಡಿ ವಿವಿಧ ವಲಯಗಳಲ್ಲಿ ಕಾರ್ಯ ನಿರ್ವಹಿಸುವ 57 ವಲಯ ಕಚೇರಿಗಳು ಇವೆ.  ಈ ವಲಯ ಕಚೇರಿಗಳ ಅಧೀನದಲ್ಲಿ ಪ್ರಾದೇಶಿಕ ಕಚೇರಿಗಳೂ ವಿವಿಧ ಶಾಖೆಗಳೂ ಇರುತ್ತವೆ.  

ಅಮೆರಿಕಾದ ಖ್ಯಾತ ವ್ಯವಸ್ಥಾಪನ ಸ¯ಹಾ ಸೇವಾ ಕಂಪನಿಯಾದ ಮೆಕೆನ್ಸಿ  ಕಂಪನಿಯ ನೆರವಿನಿಂದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ವ್ಯವಹಾರ ಪ್ರಕ್ರಿಯಯನ್ನು ಪುನರ್ರೂಪಿಸಿಕೊಳ್ಳುತ್ತಿದೆ.  1994-97ರ ಅವಧಿಯಲ್ಲಿ ಮೊದಲ ಸುತ್ತಿನ ಸುಧಾರಣೆಗಳಾಗಿತ್ತು.  ಮತ್ತೆ 2003ರಿಂದ ದೂರಗಾಮೀ ಪರಿಣಾಮ ಬೀರುವ ಮಾರ್ಪಾಡುಗಳನ್ನು ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್ ಮುಂದಾಗಿದೆ.  ವ್ಯವಹಾರ ಪ್ರಕ್ರಿಯೆ ಪುನರ್ವಿನ್ಯಾಸ (ಬಿಸಿನೆಸ್ ಪ್ರೋಸೆಸ್ ರಿ ಎಂಜಿನಿಯರಿಂಗ್) ಮತ್ತು ಕೋರ್ ಬ್ಯಾಂಕಿಂಗ್ ವ್ಯವಸ್ಥೆ  ಸ್ಟೇಟ್ ಬ್ಯಾಂಕಿನಲ್ಲಿ ಈಗ ಮಂತ್ರವಾಗಿದೆ.

ತಂತ್ರಜ್ಞಾನದ ಬಳಕೆ:  ತಂತ್ರಜಾÐನದ ¨ಳಕೆಯಲ್ಲೂ ಈ ಬ್ಯಾಂಕು ಮುಂಚೂಣಿಯಲ್ಲಿದೆ.  ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದ್ದು ಆಂತರಿಕ ಕಾರ್ಯಗಳ ನಿರ್ವಹಣೆಗೆ ಗಣಕಗಳ ಬಳಕೆ 1970ರ ದಶಕದಿಂದಲೂ ಇದ್ದರೂ, ಶಾಖಾ ಮಟ್ಟದಲ್ಲಿ ಮತ್ತು ಗ್ರಾಹಕ ಸಂಪರ್ಕ ಮಟ್ಟದಲ್ಲಿ ಗಣಕಗಳ ಬಳಕೆ ಕೊಂಚ ನಿಧಾನವಾಗಿ ಆರಂಭವಾಯಿತು. ಆದರೂ ದೇಶದಲ್ಲಿನ ವಿದೇಶೀ ಬ್ಯಾಂಕುಗಳು ಮತ್ತು ಹೊಸ ಪೀಳಿಗೆಯ ಖಾಸಗಿ ಬ್ಯಾಂಕುಗಳ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ತನ್ನ ಎಲ್ಲಾ ಶಾಖೆಗಳ ವ್ಯವಹಾರವನ್ನೂ 2004 ರ ಹೊತ್ತಿಗೇ ಸಂಪೂರ್ಣವಾಗಿ ಗಣಕೀಕರಣಗೊಳಿಸಿತು.  ಶಾಖೆಗಳ ನಡುವೆ ಗಣಕ ವ್ಯವಸ್ಥೆಯ ಮೂಲಕ ಸಂಪರ್ಕ ಕಲ್ಪಿಸುವ ಕಾರ್ಯ ಇದೀಗ ತ್ವರಿತಗತಿಯಿಂದ ಸಾಗಿದೆ.   ಇದರಿಂದ ಸಿಬ್ಬಂದಿಯ ಮೇಲಿನ ಕೆಲಸದ ಹೊರೆ ಕಡಿಮೆಯಾಗಿ ವಹಿವಾಟುಗಳ ನಿರ್ವಹಣೆಯಲ್ಲಿ ಗ್ರಾಹಕನ ಖಾತೆ ಯಾವುದೇ ಶಾಖೆಯಲ್ಲಿದ್ದರೂ ಯಾವ ಶಾಖೆಯಿಂದಲಾದರೂ ವಹಿವಾಟು ನಡೆಸಬಹುದು. ಈಗಾಗಲೇ ತನ್ನ ಶಾಖೆಗಳ ಪೈಕಿ ಎರಡು ಸಾವಿರದ ಮುನ್ನೂರಕ್ಕೂ ಹೆಚ್ಚು ಶಾಖೆಗಳು ಈ ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಟ್ಟಿದ್ದು 2007ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕಿನ ಎಲ್ಲ ಶಾಖೆಗಳನ್ನೂ ಈ ವ್ಯವಸ್ಥೆಗೆ ಒಳಪಡಿಸುವ ಯೋಜನೆಯಿದೆ. ಈ ಯೋಜನೆಗೆ ಅಗತ್ಯವಾದ ತಂತ್ರಾಂಶವನ್ನು ಆಸ್ಟ್ರೇಲಿಯಾದ ಫೈನಾನ್ಷಿಯಲ್ ನೆಟ್‍ವರ್ಕ್ ಸೊಲ್ಯೂಷನ್ಸ್ ಸಂಸ್ಥೆಯ ಮೂಲಕ ಪಡೆಯಲಾಗಿದೆ.  
ಬ್ಯಾಂಕಿನ ಎ.ಟಿ.ಎಂ. ಜಾಲವು 5500ಕ್ಕಿಂತಲೂ ಹೆಚ್ಚು ಎ.ಟಿ.ಎಂ.ಗಳನ್ನು ಹೊಂದಿದ್ದು ಏಷ್ಯಾದಲ್ಲೇ ಅತಿದೊಡ್ಡ ಜಾಲವೆನಿಸಿದೆ. ಅಂತರ್ಜಾಲ ಬ್ಯಾಂಕಿಂಗನ್ನು ಜನಪ್ರಿಯಗೊಳಿಸಲು ವಿಶೇಷ ಪ್ರಯತ್ನಗಳು ನಡೆಯುತ್ತಿವೆ.  ಅಂತರ್ಜಾಲ ತಾಣದ ಮೂಲಕ ಸ್ಟೇಟ್ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಲ್ಲಿನ ವಹಿವಾಟುಗಳ ವಿವರಗಳನ್ನು ವೀಕ್ಷಿಸುವುದರ ಜತೆಗೆ ಖಾತೆಯಿಂದ ಖಾತೆಗೆ ಹಣ ವರ್ಗಾವಣೆ, ರವಾನೆಗಳಿಗೆ ಅರ್ಜ, ಚೆಕ್ ಪುಸ್ತಕ ಪಡೆಯಲು ಮನವಿ, ಸ್ಥಾಯೀ ಆದೇಶಗಳ ನೀಡಿಕೆ, ಚೆಕ್‍ಗಳ ಪಾವತಿ ತಡೆ ಆದೇಶ ನೀಡಿಕೆ ಮುಂತಾದ ವಹಿವಾಟುಗಳನ್ನು ತಮ್ಮ ಮನೆ ಅಥವಾ ಕಚೇರಿಗಳಲ್ಲಿ ಕುಳಿತೇ ನಡೆಸಬಹುದು.  ವ್ಯವಹಾರ ಘಟಕಗಳಿಗಾಗಿ ವ್ಯಾಪಾರ್, ವ್ಯವಹಾರ್ ಮತ್ತು ವಿಸ್ತಾರ್ ಎಂಬ ಇನ್ನಷ್ಟು ವಿಸ್ತøತವಾದ ಸೌಲಭ್ಯಗಳನ್ನು ನೀಡುವ ವಿಶೇಷ ಅಂತರ್ಜಾಲ ಬ್ಯಾಂಕಿಂಗ್ ಖಾತೆಗಳಿವೆ. ಇವುಗಳ ನೆರವಿನಿಂದ ವ್ಯವಹಾರ ಘಟಕಗಳು ತಮ್ಮ ಅನೇಕ ರೀತಿಯ ಬ್ಯಾಂಕಿಂಗ್ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಜಾಲತಾಣಗಳ ಮೂಲಕ ಬ್ಯಾಂಕನ್ನು ಕುರಿತ  ಮಾಹಿತಿ ಪಡೆಯಬಹುದು.  ಶಾಖೆಗಳ ವಿಳಾಸ, ದೂರವಾಣಿ ಸಂಖ್ಯೆ, ಎ.ಟಿ.ಎಂ. ತಾಣಗಳು, ಠೇವಣಿ ಹಾಗೂ ಸಾಲ ಯೋಜನೆಗಳ ವಿವರಗಳು ಮುಂತಾದವನ್ನು ಈ ಜಾಲತಾಣಗಳಲ್ಲಿ ಒದಗಿಸಲಾಗಿದೆ 

ಸಹ ಸಂಸ್ಥೆಗಳು : ಅನೇಕ ಸಹಯೋಗಿ ಸಂಸ್ಥೆಗಳನ್ನೂ ಉಪ ಸಂಸ್ಥೆಗಳನ್ನೂ ಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಹಣಕಾಸು ಕ್ಷೇತ್ರದಲ್ಲಿ ದೇಶದ ಅತಿದೊಡ್ಡ ವ್ಯವಹಾರ ಸಮುಚ್ಚಯವಾಗಿದೆ.  ಮುಖ್ಯವೆನಿಸುವ ಕೆಲವು ಸಂಸ್ಥೆಗಳನ್ನು ಇಲ್ಲಿ ಕಾಣಿಸಲಾಗಿದೆ: 

ಬ್ಯಾಂಕಿಂಗ್ ಸಹಯೋಗಿ ಸಂಸ್ಥೆಗಳು :
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್
ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ 
ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ 
ಸ್ಟೇಟ್ ಬ್ಯಾಂಕ್ ಆಫ್ ಬಿಕಾನೀರ್ ಮತ್ತು ಜೈಪುರ್ 
ಸ್ಟೇಟ್ ಬ್ಯಾಂಕ್ ಆಫ್ ಇಂದೂರ್ 
ಸ್ಟೇಟ್ ಬ್ಯಾಂಕ್ ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ಬ್ಯಾಂಕ್  

1990 ರ ದಶಕದಲ್ಲಿ ಬಿ.ಸಿ.ಸಿ.ಐ. (ಬ್ಯಾಂಕ್ ಆಫ್ ಕ್ರೆಡಿಟ್ ಅಂಡ್ ಕಾಮರ್ಸ್ ಇಂಟರ್ ನ್ಯಾಷನಲ್) ಮುಳುಗಡೆಯಾದಾಗ ಅದರ ಮುಂಬೈ ಕಚೇರಿಯನ್ನು ತೆಗೆದುಕೊಂಡು ಸ್ಥಾಪಿಸಿಲಾದ ಪ್ರತ್ಯೇಕ ಅನುವರ್ತಿ ಸಂಸ್ಥೆಯೇ ಸ್ಟೇಟ್ ಬ್ಯಾಂಕ್ ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ಬ್ಯಾಂಕ್.  ಜನವರಿ 1994 ರಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಅದರ ರೂ.100 ಕೋಟಿ ಪಾವತಿ ಬಂಡವಾಳವು ಸಂಪೂರ್ಣವಾಗಿ ಭಾರತೀಯ ಸ್ಟೇಟ್ ಬ್ಯಾಂಕಿನದು.  
ದೇಶೀಯ ಅನುವರ್ತಿ ಸಂಸ್ಥೆಗಳು : ಈ ಬ್ಯಾಂಕಿಂಗ್ ಸಂಸ್ಥೆಗಳಲ್ಲದೆ ಹಲವಾರು ಬ್ಯಾಂಕೇತರ ಸಂಸ್ಥೆಗಳೂ ಸ್ಟೇಟ್ ಬ್ಯಾಂಕ್ ಗುಂಪಿಗೆ ಸೇರುತ್ತವೆ.  ಅವುಗಳಲ್ಲಿ ಮುಖ್ಯವಾದವು :

1. ಭಾರತೀಯ ಸ್ಟೇಟ್ ಬ್ಯಾಂಕ್ ಬಂಡವಾಳ ಮಾರುಕಟ್ಟೆ ನಿ. 
2. ಭಾರತೀಯ ಸ್ಟೇಟ್ ಬ್ಯಾಂಕ್ ನಿಧಿ ನಿರ್ವಹಣೆ (ಪ್ರೈ) ನಿ. 
3. ಭಾರತೀಯ ಸ್ಟೇಟ್ ಬ್ಯಾಂಕ್  ವಸೂಲಿ ಮತ್ತು ವಾಣಿಜ್ಯ ಸೇವೆ (ಪ್ರೈ) ನಿ. 
4. ಭಾರತೀಯ ಸ್ಟೇಟ್ ಬ್ಯಾಂಕ್  ಕಾರ್ಡುಗಳು ಮತ್ತು ಪಾವತಿ ಸೇವೆ (ಪ್ರೈ)  ನಿ.          
5. ಭಾರತೀಯ ಸ್ಟೇಟ್ ಬ್ಯಾಂಕ್  ಜೀವವಿಮಾ ಕಂಪನಿ ನಿ.  

ವಿದೇಶೀ ಅನುವರ್ತಿ ಸಂಸ್ಥೆಗಳು : ಕೆಲವು ವಿದೇಶೀ ಸಂಸ್ಥೆಗಳೂ ಸ್ಟೇಟ್ ಬ್ಯಾಂಕ್ ಗುಂಪಿನಲ್ಲಿವೆ. ಇವೆಲ್ಲವೂ ಬ್ಯಾಂಕಿಂಗ್ ಸಂಸ್ಥೆಗಳು.
1. ಎಸ್.ಬಿ.ಐ. ಇಂಟರ್ ನ್ಯಾಷನಲ್ [ಮಾರಿಷಸ್] ಲಿಮಿಟೆಡ್
2. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ [ಕೆನಡಾ]
3. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ [ಕ್ಯಾಲಿಫೋರ್ನಿಯಾ]
4. ಇಂಡೋ ನೈಜೀರಿಯನ್ ಮರ್ಚೆಂಟ್ ಬ್ಯಾಂಕ್ ಲಿಮಿಟೆಡ್

ಸಂಬಂಧಿತ ಸಂಸ್ಥೆಗಳು:
ಹಲವು ಇತರ ಸಂಸ್ಥೆಗಳಲ್ಲೂ ಭಾರತೀಯ ಸ್ಟೇಟ್ ಬ್ಯಾಂಕ್ ಶೇ.20 ರಿಂದ ಶೇ.50 ರಷ್ಟು ಬಂಡವಾಳ ಹೊಂದಿದೆ. 
1. ಜಿ. ಇ. ಕ್ಯಾಪಿಟಲ್ ವ್ಯವಹಾರ ಪ್ರಕ್ರಿಯಾ ನಿರ್ವಹಣೆ ಸೇವೆ (ಪ್ರೈ) ನಿಯಮಿತ
2. ನೇಪಾಳ ಎಸ್.ಬಿ.ಐ. ಬ್ಯಾಂಕ್ ಲಿಮಿಟೆಡ್
3. ಬ್ಯಾಂಕ್ ಆಫ್ ಭೂತಾನ್
4. ಭಾರತೀಯ ಉದ್ದರಿ ಮಾಹಿತಿ ಸಂಸ್ಥೆ (ಸಿಐಬಿಐಎಲ್)
ಈ ಸಂಸ್ಥಗಳಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜತೆಗೂಡಿ  30 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಪ್ರವರ್ತಿಸಿದೆ.  ಇವು 16 ರಾಜ್ಯಗಳ  102 ಜಿಲ್ಲೆಗಳಲ್ಲಿ 2339 ಶಾಖೆಗಳ ಜಾಲವನ್ನು ಹೊಂದಿದ್ದು  ಗ್ರಾಮೀಣ ಅಭಿವೃದ್ಧಿಯಲ್ಲಿ ವಶೇಷ ಪಾತ್ರ ವಹಿಸುತ್ತಿವೆ. 

ಬ್ಯಾಂಕಿನ ದರ್ಶನ, ಮೌಲ್ಯಗಳು
ಸಾರ್ವಜನಿಕ ಸೇವೆಗೆಂದೇ ಹುಟ್ಟಿದ ಈ ಬ್ಯಾಂಕಿಗೆ ತನ್ನದೇ ಆದ  ದರ್ಶನವಿದೆ.  ಗ್ರಾಹಕ ಸೇವೆಯಲ್ಲಿ ಉತ್ಕøಷ್ಟತೆ ಸಾಧಿಸಿ ಜಾಗತಿಕ ಗುಣಮಟ್ಟದ ಸೇವೆಗಳನ್ನು ನೀಡುವ ಪ್ರಮುಖ ಹಣಕಾಸು ಸೇವಾ ಸಮೂಹವಾಗಬೇಕು ; ದೇಶದಲ್ಲಿ ಅಭಿವೃದ್ಧಿ ಬ್ಯಾಂಕಿಂಗಿನ ಅಗ್ರ ಸ್ಥಾನವನ್ನು ಉಳಿಸಿಕೊಳ್ಳ ಬೇಕು ; ತಲಾ ಷೇರು ಆದಾಯವನ್ನು ವೃದ್ಧಿಸಿ ಷೇರುದಾರರ ಮೌಲ್ಯವರ್ಧನೆ ನೀಡಬೇಕು ; ಪರಸ್ಪರ ಸಹಕಾರ ಮತ್ತು ಬದ್ಧತೆಯುಳ್ಳ ಹಾಗೂ ತೃಪ್ತಿಕರವೂ ಉತ್ತೇಜಕವೂ ಆದ ಕಾರ್ಯಪರಿಸರವುಳ್ಳ ಸಂಸ್ಥಯಾಗಿ ರೂಪುಗೊಳ್ಳಬೇಕು ಎಂಬುದೇ ಈ ದರ್ಶನ.  ಷೇರುದಾರರ, ಗ್ರಾಹಕರ ಮತ್ತು ಸಿಬ್ಬಂದಿಯ ಕಲ್ಯಾಣಕ್ಕೆ ಬದ್ಧತೆ,  ಅಭಿವೃದ್ಧಿ ಬ್ಯಾಂಕಿಗೆ ಒತ್ತು, ವೈವಿಧ್ಯ ಮಯವಾಗಿರುವ ಹಣಕಾಸು ಸೇವಾ ವಲಯದಲ್ಲಿ ಮುಂಚೂಣಿಯ ಪಾತ್ರವಹಿಸುವಿಕೆ ಇವು ಬ್ಯಾಂಕಿನ ಕಾರ್ಯಲಕ್ಷ್ಯಗಳು.  ಗ್ರಾಹಕ ಸೇವೆಯಲ್ಲಿ ಉತ್ಕøಷ್ಟತೆ, ಲಾಭಪ್ರದತೆ, ಬ್ಯಾಂಕಿನ ಅಭಿವೃದ್ಧಿಗೆ ಬದ್ಧತೆ, ನೇರ ವ್ಯವಹಾರ ಮತ್ತು ಸಂಬಂಧಗಳು, ವ್ಯವಹಾರದಲ್ಲಿ ಶಿಸ್ತು ಮತ್ತು ಪಾರದರ್ಶಕತೆ, ಪ್ರಾಮಾಣಿಕತೆ, ತಂಡ ಹುರುಪು, ನವೋನ್ಮೇಷಣೆ ಹಾಗೂ ಕಲಿಕೆ ಮತ್ತು ನವೀಕರಣಕ್ಕೆ ಒತ್ತು — ಇವು ಬ್ಯಾಂಕಿನ ಘೋಷಿತ ಮೌಲ್ಯಗಳು. 

ವೈವಿಧ್ಯಪೂರ್ಣ ಸೇವೆಗಳು 

ವಿವಿಧ ಕ್ಷೇತ್ರಗಳ ಗ್ರಾಹಕರ ಅಗತ್ಯಗಳನ್ನು ಗಮನಿಸಿ ಅವರವರಿಗೆ ಅನುಕೂಲವಾಗುವಂಥ ಅನೇಕ ರೀತಿಯ ಸೇವೆಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನೀಡುತ್ತಿದೆ.  ವೈಯಕ್ತಿಕ ಗ್ರಾಹಕರಿಗೆ ವಿವಿಧ ಆಯ್ಕೆ ಯೋಜನೆ  ಸ್ವಯಂ ವರ್ಗಾವಣೆ ಕನಕ ಧಾರಾ ಮುಂತಾದ ಹೊಸ ರೀತಿಯ ಠೇವಣಿ ಯೋಜನೆಗಳು;  ಗೃಹ ನಿರ್ಮಾಣ/ನವೀಕರಣ/ದುರಸ್ತಿ/ಖರೀದಿ, ನಿವೇಶನ ಖರೀದಿ, ವಾಹನ ಖರೀದಿ, ಶಿಕ್ಷಣ, ವೈದ್ಯಕೀಯ ವೆಚ್ಚ, ವೈಯಕ್ತಿಕ ಅಗತ್ಯಗಳು ಮುಂತಾದವಕ್ಕೆ ಉದಾರವಾಗಿ ಸುಲಭ ಕಂತುಗಳ ಸಾಲನೀಡಿಕೆ; ಅಡಮಾನ ಸಾಲ, ಷೇರುಗಳ ಆಧಾರದ ಸಾಲ, ಚಿನ್ನಾಭರಣದೆ ಸಾಲ, ನಿರಾಧಾರ ಸಾಲಗಳೂ ಉಂಟು.  ಅನಿವಾಸಿ ಭಾರತೀಯರಿಗೆ  ರವಾನೆ, ವಿದೇಶೀ ಕರೆನ್ಸಿಯಲ್ಲಿನ ವಿವಿಧ ರೀತಿಯ ಖಾತೆಗಳು, ಭಾರತದ ರೂಪಾಯಿ ಮತ್ತು ವಿದೇಶೀ ಕರೆನ್ಸಿಯಲ್ಲಿ ಸಾಲಸೌಲಭ್ಯ ಮುಂತಾದ  ವಿನಿಮಯ  ವಿವಿಧ ರೀತಿಯ ಹಣಕಾಸು ಸೇವೆಗಳನ್ನು ಬ್ಯಾಂಕು ನೀಡುತ್ತಿದೆ.
ಕೃಷಿ ಕ್ಷೇತ್ರದಲ್ಲಿ ರೈತರ ಎಲ್ಲ ಕೃಷಿ ಮತ್ತು ವೈಯಕ್ತಿಕ ಅಗತ್ಯಗಳಿಗೆ  ಸಾಲ ನೀಡುವುದಲ್ಲದೆ, ಸೇವಾ ಕ್ಷೇತ್ರ ಯೋಜನೆಯಡಿ ಗ್ರಾಮಗಳ ದತ್ತು ಸ್ವೀಕಾರ, ಗುತ್ತಿಗೆ ಕೃಷಿ ಯೋಜನೆ, ಏತ ನೀರಾವರಿ, ಸ್ವಸಹಾಯ ಗುಂಪುಗಳು, ಕೃಷಿ ಉದರಿ ಸಹಕಾರ ಸಂಘಗಳು ಹಾಗೂ ರೈತರ ಸಹಕಾರ ಸಂಘಗಳಿಗೆ, ಕ್ಷೀರ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆಗೆ ನೆರವು ನೀಡಲು ಬ್ಯಾಂಕಿನ ಯೋಜನೆಗಳಿವೆ.

ಸಣ್ಣ ಮತ್ತು ಮಧ್ಯಮ ಉದ್ಯಮ ಘಟಕಗಳಿಗೆ  ಆರಂಭದಿಂದಲೂ ಉತ್ತೇಜನ ನೀಡುತ್ತ ಬಂದಿರುವ ಸ್ಟೇಟ್ ಬ್ಯಾಂಕ್ ಈಚಿನ ವರ್ಷಗಳಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ರೂಪಿಸಿ ಈ ವಲಯಕ್ಕೆ ಬೆಂಬಲ ನೀಡುತ್ತಿದೆ. ಉದ್ಯಮಶೀಲರಿಗೆ ಉದ್ಯಮ ಆರಂಭಿಸಲು ಸ್ವಭಾಗ ಹಣಕ್ಕಾಗಿ  ಸಾಲ, ಸ್ತ್ರೀ ಶಕ್ತಿ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ ರಿಯಾಯತಿ ದರದಲ್ಲಿ ನೆರವು, ಸಣ್ಣ ಕೈಗಾರಿಕೆಗಳ ಕಟ್ಟಡ, ಯಂತ್ರೋಪಕರಣ, ದುಡಿಮೆ ಬಂಡವಾಳ ಮುಂತಾದ ಎಲ್ಲ ಅಗತ್ಯಗಳಿಗೆ ನೆರವಿನ ಜತೆಗೆ ಅನಿರೀಕ್ಷ್ಷಿತ ವೆಚ್ಚಗಳ ನಿರ್ವಹಿಸಲು, ಅಧಿಕ ಬಡ್ಡಿದರದ ಸಾಲಗಳನ್ನು ನಿವಾರಿಸಿಕೊಳ್ಳಲು ಹಾಗೂ ಉತ್ಪನ್ನಗಳ ಗುಣಮಟ್ಟ ಸುಧಾರಿಸುವ ಯೋಜನೆಗಳನ್ನು ಜಾರಿಮಾಡಲು ಹಣಕಾಸು ಸೇವೆಗಳು ಲಭ್ಯವಿದೆ. ಶಿಕ್ಷಣ, ವೈದ್ಯಕೀಯ, ಸಾರಿಗೆ, ಪ್ರವಾಸ, ಮನೋರಂಜನೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಉದ್ಯಮ ಘಟಕಗಳಿಗೆ ಬ್ಯಾಂಕು ವಿಶೇಷ ಯೋಜನೆಗಳನ್ನು ರೂಪಿಸಿದೆ.  ಕೈಗಾರಿಕಾ ಕ್ಷೇತ್ರದ ಸಾಲ ನೀಡಿಕೆಯಲ್ಲಿ ಸದಾ ಮುಂದಿರುವ ಸ್ಟೇಟ್ ಬ್ಯಾಂಕ್ ಈಚೆಗೆ ಆರಂಭಿಸಿರುವ ಮುಕ್ತ ಅವಧಿ ಸಾಲ ಒಂದು ವಿನೂತನ ಯೋಜನೆ. 
ತಂತ್ರಜ್ಞಾನಾಧಾರಿತ ಹೊಸ ಸೇವೆಗಳನ್ನು ಒದಗಿಸುವಲ್ಲಿಯೂ ಬ್ಯಾಂಕ್ ಹೆಚ್ಚು ಆಸಕ್ತಿ ತೋರಿದೆ.  ಏ.ಟಿ.ಎಂ. ಜಾಲದ ವಿಸ್ತರಣೆ, ಇಂಟರ್ ನೆಟ್ ಬ್ಯಾಂಕಿಂಗ್ ವಹಿವಾಟುಗಳನ್ನು ಜನಪ್ರಿಯಗೊಳಿಸುವುದು, ವಿದ್ಯುತ್, ನೀರು , ಟೆಲಿಫೋನ್ ಬಿಲ್ಲುಗಳ ವಿದ್ಯುನ್ಮಾನ ಪಾವತಿ ವ್ಯವಸ್ಥೆ, ಬ್ಯಾಂಕಿನ ಅಂತರಜಾಲ  ಖಾತೆ ಹೊಂದಿರುವ ಗ್ರಾಹಕರು (ಈ-ರೈಲ್ ಯೋಜನೆ ಮೂಲಕ) ರೈಲು ಪ್ರಯಾಣದ ಟಕೆಟ್ಟುಗಳನ್ನು ಕಾಯ್ದಿರಿಸುವ ಸೌಲಭ್ಯ, ವಿದ್ಯುನ್ಮಾನ ರವಾನೆ ವ್ಯವಸ್ಥೆ — ಇವು ಕೆಲವು ಉದಾಹರಣೆಗಳು. 

ಸರ್ಕಾರದ ವ್ಯವಹಾರ

ಗಣನೀಯ ಪ್ರಮಾಣದ ಸರಕಾರೀ ವ್ಯವಹಾರವನ್ನು ನಿರ್ವಹಿಸುತ್ತಿರುವ ಸ್ಟೇಟ್ ಬ್ಯಾಂಕ್ ಈ ಎರಡೂ ಕ್ಷೇತ್ರಗಳಿಗೆ ಬ್ಯಾಂಕಿಂಗ್ ಸೌಲಭ್ಯ ನೀಡಿಕೆಯ ಮುಂಚೂಣಿಯಲ್ಲಿದೆ. ಭಾರತದಲ್ಲಿರುವ ಶಾಖೆಗಳ ಪೈಕಿ 7000 ಕ್ಕೂ ಹೆಚ್ಚಿನ ಶಾಖೆಗಳು ತೆರಿಗೆ ರಸೀತಿಗಳು, ಪಾವತಿಗಳು, ಪಿಂಚಣಿ ಮುಂತಾದ ವಿವಿಧ ರೀತಿಯ ಸರಕಾರಿ ವಹಿವಾಟುಗಳನ್ನು ನಡೆಸುತ್ತಿವೆ.  ಅವುಗಳಲ್ಲಿ ಸುಮಾರು 500 ಶಾಖೆಗಳು ಕೇಂದ್ರ ಸರ್ಕಾರದ ವಹಿವಾಟುಗಳ ಕೇಂದ್ರೀಯ ಶಾಖೆಗಳಾಗಿ ಫೋಕಲ್ ಪಾಯಿಂಟ್ ಶಾಖೆಗಳು) ಕಾರ್ಯ ನಿರ್ವಹಿಸುತ್ತಿವೆ.  ಬ್ಯಾಂಕಿನ ಸರ್ಕಾರಿ ಲೆಕ್ಕ ಇಲಾಖೆಯು ಮುಂಬೈನಲ್ಲಿದೆ.  ಎರಡು ಸಾವಿರಕ್ಕೂ ಹೆಚ್ಚಿನ ಶಾಖೆಗಳಲ್ಲಿ ರಿಸರ್ವ್ ಬ್ಯಾಂಕಿನ ಪರವಾಗಿ ಕರೆನ್ಸಿ ಕೋಶ(ಕರೆನ್ಸಿ ಚೆಸ್ಟ್) ಗಳನ್ನು ನಿರ್ವಹಿಸಲಾಗುತ್ತಿದೆ. 
ವಿದೇಶೀ ವಿನಿಮಯ ವ್ಯವಹಾರ

ವಿದೇಶೀ ವಿನಮಯ ವ್ಯವಹಾರಕ್ಕೆ ಬ್ಯಾಂಕು ಒತ್ತು ನೀಡಿದೆ.  ವಿಶ್ವಾದ್ಯಂತ ವಿವಿಧ ಕಾಲ ವಲಯಗಳಿಗೆ ಸೇರಿದ 29 ದೇಶಗಳಲ್ಲಿ 52 ವಿದೇಶೀ ಕಚೇರಿಗಳನ್ನು ಬ್ಯಾಂಕ್ ತೆರೆದಿದೆ.  ಅಲ್ಲದೆ 127 ದೇಶಗಳ  ಸುಮಾರು ಪ್ರತಿಷ್ಥಿತವಾದ 600 ಬ್ಯಾಂಕುಗಳೊಂದಿಗೆ ವ್ಯವಹಾರ ಸಂಬಂಧ (ಕರೆಸ್ಪಾಂಡೆಸ್ಟ್ ಬಾಂಧವ್ಯ) ಬೆಳೆಸಿಕೊಂಡಿದೆ.  ವಾಷಿಂಗ್ ಟನ್, ಷಿಕಾಗೋ, ಲಂಡನ್, ಮಾಸ್ಕೋ, ಕೊಲಂಬೋ, ಟೊರಂಟೋ, ಸಿಡ್ನಿ, ಶಾಂಘಾಯ್.  ಎಸ್.ಬಿ.ಐ. ಕೆನಡಾ ಮತ್ತು ಎಸ್.ಬಿ.ಐ. ಕ್ಯಾಲಿಫೋರ್ನಿಯಾ ಇವೆರಡೂ ಬ್ಯಾಂಕಿನ ಪೂರ್ಣ ಒಡೆತನದ ಸಂಸ್ಥೆಗಳು. ಇಂಡೋ ನೈಜೀರಿಯನ್ ವಣಿಕ ಬ್ಯಾಂಕ್ ಮತ್ತು ಎಸ್. ಬಿ. ಐ. ಇಂಟರ್ ನ್ಯಾಷನಲ್ (ಮಾರಿಷಸ್) ಲಿ. ಎಂಬ ಸಹವರ್ತಿ ಸಂಸ್ಥಯೂ, ನೇಪಾಳ ಎಸ್.ಬಿ.ಐ. ಬ್ಯಾಂಕ್ ಲಿ. ಮತ್ತು ಬ್ಯಾಂಕ್ ಆಫ್ ಭೂತಾನ್ ಎಂಬ ಎರಡು ಜಂಟಿ ಕಾರ್ಯಾಚರಣೆ ಸಂಸ್ಥೆಗಳೂ ಇದ್ದು ಬ್ಯಾಂಕಿನ ವಿದೇಶೀ ಶಾಖೆಗಳ ಜಾಲ ಸಾಕಷ್ಟು ವಿಸ್ತøತವೂ, ಶಕ್ತಿಯುತವೂ ಆಗಿದೆ.  ಬ್ಯಾಂಕಿನ ಸಾಗರೋತ್ತರ ಕಾರ್ಯಾಚರಣೆಗಳ ಭಾಗವಾಗಿ ಬ್ಯಾಂಕು ಕೊಲ್ಲಿಯಲ್ಲಿ ನಾಲ್ಕು ವಿನಿಮಯ ಕಂಪನಿಗಳ ವ್ಯವಸ್ಥಾಪನÉಗೂ ಕರಾರು ಮಾಡಿಕೊಂಡು ಕೋಟ್ಯಂತರ ರೂ. ಲಾಭ ಗಳಿಸಿದೆ.  

ಭಾರತದ ಬ್ಯಾಂಕುಗಳ ವಿದೇಶೀ ವ್ಯವಹಾರದಲ್ಲಿ ಶೇ.30 ಕ್ಕೂ ಹೆಚ್ಚು ಪಾಲು ಭಾರತೀಯ ಸ್ಟೇಟ್ ಬ್ಯಾಂಕಿನದು. ಜಾÁಗತಿಕ ಗೋಳೀಯ ಸಂಪರ್ಕ ಸೇವೆಯ ಕಾರ್ಯಾಚರಣೆಯಿಂದ ಬ್ಯಾಂಕಿನ ವಿದೇಶೀ ವಹಿವಾಟುಗಳ ವೆಚ್ಚ ಕಡಿತವಾಗಿರುವು ದಲ್ಲದೆ  ವ್ಯವಹಾರ ಪ್ರಕ್ರಿಯೆಯಲ್ಲಿ ವಿದೇಶೀ ಬ್ಯಾಂಕುಗಳ ಅವಲಂಬನೆಯೂ ಕಡಿಮೆಯಾಗಿ ಲಾಭಪ್ರದತೆ ಗಣನೀಯವಾಗಿ ಹೆಚ್ಚಿದೆ. 

ಖಜಾನೆ ವಹಿವಾಟುಗಳು

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಪರ್ಧೆ ಅತಿಯಾಗಿ ಠೇವಣಿ ಮತ್ತು ಮುಂಗಡಗಳ ಮೇಲಿನ ಬಡ್ಡಿ ಅಂತರವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಖಜಾನೆ ವಹಿವಾಟುಗಳ ಮಹತ್ವ ಹೆಚ್ಚಿದೆ.  ಅಲ್ಲದೆ ಈಚಿನ ವರ್ಷಗಳಲ್ಲಿ ಬ್ಯಾಂಕುಗಳ ಠೇವಣಿ ಸಂಗ್ರಹ ಅಧಿಕವಾಗಿ ಅದಕ್ಕೆ ತಕ್ಕ ಪ್ರಮಾಣದಲ್ಲಿ  ಸಾಲನೀಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಹೆಚ್ಚುವರಿ ಹಣವನ್ನು ಒಳ್ಳೆಯ ಆದಾಯ ತರುವ ವಿನಿಯೋಜನೆಗಳಲ್ಲಿ ತೊಡಗಿಸುವ ಕಾರ್ಯ ಮುಖ್ಯವಾಗುತ್ತದೆ.  ಮೂಲತ: ಠೇವಣಿ ಸಂಗ್ರಹ ಮತ್ತು ಸಾಲನೀಡಿಕೆಯಿಂದ ಹೆಚ್ಚಿನ ಆದಾಯ ಗಳಿಸುತ್ತಿದ್ದ ಬ್ಯಾಂಕುಗಳು ಈಚೆಗೆ ಖಜಾನೆ ವ್ಯವಹಾರದಿಂದಲೂ ಅಧಿಕ ಲಾಭ ಗಳಿಸುತ್ತಿವೆ.  ಶಾಸನ¨ದ್ಧ ಮೀಸಲುಗಳ ಅಗತ್ಯಗಳ ಪೂರೈಕೆ, ಕರೆಹಣ ಮಾರುಕಟ್ಟೆಯ ಹಾಗೂ ಇತರ ವಿನಿಯೋಜನೆಗಳ ನಿರ್ವಹಣೆ ಮುಂತಾದ ಖಜಾನೆ ವಹಿವಾಟುಗಳನ್ನು ನಿಯಂತ್ರಿಸುವ ಬ್ಯಾಂಕಿನ ವಿಭಾಗವು ಮುಂಬೈನಲ್ಲಿದೆ. 
ವಿಜಯ್ ಯೋಜನೆ 

2006 ರಲ್ಲಿ ಬ್ಯಾಂಕು 200 ವರ್ಷಗಳ ಅಸ್ತಿತ್ವವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಹೊಸ ಸಾಧನೆಯ ಸಂಸ್ಕøತಿಯನ್ನು ಬೆಳೆಸುವುದು, 2008 ರಲ್ಲಿ ಜಾಗತಿಕ ಮಟ್ಟದ ಬ್ಯಾಂಕಿಂಗ್ ಸೇವೆ ನೀಡುವುದುಮ, ಏಷ್ಯಾದ ಅಗ್ರ ಬ್ಯಾಂಕುಗಳಲ್ಲಿ 5ನೆಯ ಹಾಗೂ ಜಾಗತಿಕ ಅಗ್ರ ಬ್ಯಾಂಕುಗಳಲ್ಲಿ 50ನೆಯ ಸ್ಥಾನ ಪಡೆಯುವ ಗುರಿಯನ್ನು ತಲುಪಲು ವಿಜಯ್ ಯೋಜನೆ ಎಂಬ ಹೆಸರಿನ ಸರ್ವಾಂಗೀಣ ಯೋಜನೆÀಯೊಂದನ್ನು ಜಾರಿಗೊಳಿಸಿದೆ. [ಸದ್ಯಕ್ಕೆ ಏಷ್ಯಾದ ಮೊದಲ 20 ಬ್ಯಾಂಕುಗಳ ಮತ್ತು ವಿಶ್ವದ ಮೊದಲ 100 ಬ್ಯಾಂಕುಗಳ ಪಟ್ಟಿಯಲ್ಲಿ ಬರುತ್ತದೆ.]   ಈ ಯೋಜನೆಯ ಮುಖ್ಯ ಅಂಶಗಳೆಂದರೆ : 
            1. ಮಾನವ ಸಂಪನ್ಮೂಲದ ಕುಶಲೀಕರಣ
	    2. ವ್ಯವಹಾರ ಪ್ರಕ್ರಿಯಾ ಪುನರ್ವಿನ್ಯಾಸ 
	    3. ಕೋರ್ ಬ್ಯಾಂಕಿಂಗ್ ಪರಿಹಾರ   

ವಿದೇಶಗಳಲ್ಲಿರುವ ಬ್ಯಾಂಕುಗಳನ್ನು ತೆಗೆದುಕೊಂಡು ತ್ವರಿತವಾಗಿ ಅಂತರ ರಾಷ್ಟ್ರೀಯ ವ್ಯವಹಾರ ವೃದ್ಧಿಯನ್ನು ಸಾಧಿಸುವ ಯೋಜನೆಯೂ ಇದ್ದು ಅತಿ ಶೀಘ್ರದಲ್ಲೇ 75 ವಿದೇಶೀ ಶಾಖೆಗಳ ಗುರಿಯನ್ನು ತಲುಪುವ ನಿರೀಕ್ಷೆಯಿದೆ. 

ವ್ಯವಹಾರ ಪ್ರಕ್ರಿಯೆ ಪುನರ್ವಿನ್ಯಾಸ : 

ತನ್ನ ವ್ಯವಹಾರ ಪ್ರಕ್ರಿಯೆಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತ ಗ್ರಾಹಕ ಸೇವೆಯಲ್ಲಿ ದಕ್ಷತೆ ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿರುವ ಸ್ಟೇಟ್ ಬ್ಯಾಂಕ್ 2003 ರಿಂದ ಅಮೆರಿಕಾದ ಖ್ಯಾತ ವ್ಯವಸ್ಥಾಪನ ಸಲಹಾ ಸಂಸ್ಥೆಯಾದ ಮೆಕೆನ್ಸಿ ಕಂಪನಿಯ ನೆರವಿನಿಂದ ವ್ಯವಹಾರ ಪ್ರಕ್ರಿಯೆಯ ಸ್ವರೂಪವನ್ನು ತೀವ್ರವಾಗಿ ಬದಲಾಯಿಸಿಕೊಳ್ಳುತ್ತಿದೆ.  ಶಾಖೆಗಳಲ್ಲಿನ ಕೆಲಸದ ಒತ್ತಡವನ್ನು ಕಡಿಮೆಮಾಡಿ ಗ್ರಾಹಕರೊಡನೆ ಸಂಪರ್ಕ ಹೆಚ್ಚಿಸಲು ನೆರವಾಗುವಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.  ಸಾಲದ ಅರ್ಜಿಗಳ ಪರಿಶೀಲನೆ ಮತ್ತು ಮಂಜೂರಾತಿಗೆ ಪ್ರತ್ಯೇಕ ಕೇಂದ್ರೀಕೃತ ವಿಭಾಗಗಳನ್ನು ಸ್ಥಾಪಿಸಿರುವುದಲ್ಲದೆ  ಮಾರಾಟಗಾರಿಕೆಗೂ ವಿಶೇಷ ಗಮನ ಹರಿಸಲಾಗಿದೆ.  ಮಾರುಕಟ್ಟೆ ಸರ್ವೇಕ್ಷಣೆಗೆ ವಿಶೇಷ ತಂಡಗಳನ್ನು ರೂಪಿಸಿ ಗ್ರಾಹಕ ಸಂಪರ್ಕಕ್ಕೆ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೃಷಿ, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರ ಹಾಗೂ ವೈಯಕ್ತಿಕ ವಿಭಾಗಗಳಿಗೆ ಪ್ರತ್ಯೇಕವಾದ ಮಾರಾಟಗಾರಿಕೆ ತಂಡಗಳನ್ನು ರಚಿಸಲಾಗಿದೆ. ವೈಯಕ್ತಿಕ ಬ್ಯಾಂಕಿಂಗ್ ವ್ಯವಹಾರ ನಡೆಸುವ 400 ಕ್ಕೂ ಹೆಚ್ಚು ಮುಖ್ಯ ಶಾಖೆಗಳಲ್ಲಿ ಗ್ರಾಹಕ ಮಿತ್ರ ರನ್ನು ನೇಮಿಸುವ ಮೂಲಕ ಗ್ರಾಹಕರು ಕಾಯುವ ಸಮಯವನ್ನು ಕಡಿಮೆಗೊಳಿಸಿ ತ್ವರಿತ ಸೇವೆಯ ಪರ್ಯಾಯ ಮಾರ್ಗಗಳನ್ನು ತೆರೆದಿದೆ. ಇದಲ್ಲದೆ ಚೆಕ್ಕುಗಳ ತ್ವರಿತ ವಸೂಲಾತಿ, ಶಾಖೆಗಳ ನಗದು ನಿರ್ವಹಣೆ ಮುಂತಾದವುಗಳಿಗೆ ಹೊಸ ವ್ಯವಸ್ಥೆಗಳನ್ನೂ ರೂಪಿಸಲಾಗುತ್ತಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ; ತರಬೇತಿ

ಬ್ಯಾಂಕಿನ ಸಿಬ್ಬಂದಿ ಸದಸ್ಯರ ಸಂಖ್ಯೆ ಎರಡು ಲಕ್ಷವನ್ನೂ ಮೀರಿದೆ.  ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಬ್ಯಾಂಕ್ ವಿಶೇಷ ಆಸಕ್ತಿ ಹೊಂದಿದೆ. ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಮಾನವ ಸಂಪನ್ಮೂಲ ಅಬಿವೃದ್ಧಿಯೆಂಬುದು ಉದ್ಯೋಗಿಗಳು ಬ್ಯಾಂಕಿನ ಗುರಿಗಳ ಸಾಧನೆಯ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾರ್ಥಕತೆಯ ಅನುಭವ ಹೊಂದಬೇಕೆಂಬ ಆಶಯ ದಿಂದ ತನ್ನ ಉದ್ಯೋಗಿಗಳಲ್ಲಿರುವ ಕ್ರಿಯಾಶೀಲತೆಯನ್ನು ಪ್ರವರ್ತಿಸುವ ನಿರಂತರ ಪ್ರಕ್ರಿಯೆಯಾಗಿದೆ.  ತರಬೇತಿಯು ಬ್ಯಾಂಕಿನ ಚಟುವಟಿಕೆಯ ಅವಿಭಾಜ್ಯ ಅಂಗವಾಗಿರುವುದು ಈ ಬ್ಯಾಂಕಿನ ಇನ್ನೊಂದು ವಿಶೇಷ. ವ್ಯಕ್ತಿತ್ವದ ವಿಕಾಸ ಹಾಗೂ ಸಂಸ್ಥೆಯ ಕಾರ್ಯದ ಪರಿಣಾಮಕಾರಿ ನಿರ್ವಹಣೆಯ ದೃಷ್ಟಿಯಿಂದ ತಿಳುವಳಿಕೆ ನೀಡುವುದು, ಕೌಶಲಗಳನ್ನು ಅಭಿವೃದ್ಧಿ ಪಡಿಸುವುದು ಹಾಗೂ ಮನೋಭಾವಗಳನ್ನು ರೂಪಿಸುವುದು ಈ ತರಬೇತಿಯ ಉದ್ದೇಶ.  ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿವಿಧ ವೃತ್ತಗಳ ಮಟ್ಟದಲ್ಲಿ ಕೆಲಸ ಮಾಡುವ 49 ಸಿಬ್ಬಂದಿ ತರಬೇತಿ ಕೇಂದ್ರಗಳಿವೆ.  ಇವುಗಳ ಜತೆಗೆ ನಾಲ್ಕು ಶೃಂಗ ತರಬೇತಿ ಸಂಸ್ಥಗಳಿವೆ.  ಸ್ಟೇಟ್ ಬ್ಯಾಂಕ್ ಸಿಬ್ಬಂದಿ ಮಹಾವಿದ್ಯಾಲಯ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಕುರಿತು ತರಬೇತಿ ನೀಡುವ ಉದ್ದೇಶ ಹೊಂದಿರುವ ಸ್ಟೇಟ್ ಬ್ಯಾಂಕ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಸ್ಟೇಟ್ ಬ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಕಮ್ಯೂನಿಕೇಷನ್ ಮ್ಯಾನೇಜ್‍ಮೆಂಟ್ ಈ ಮೂರು ಸಂಸ್ಥೆಗಳು ಹೈದರಾಬಾದಿನಲ್ಲಿವೆ. ಸ್ಟೇಟ್ ಬ್ಯಾಂಕ್ ಅಕಾಡೆಮಿ ಎಂಬ ಹೆಸರಿನ ಇನ್ನೊಂದು ಶ್ಯಂಗ ಸಂಸ್ಥೆ ದೆಹಲಿ ಬಳಿಯ ಗುಡಗಾಂವ್‍ನಲ್ಲಿದೆ. ಹೈದರಾಬಾದಿನ ಸ್ಟೇಟ್ ಬ್ಯಾಂಕ್ ಸಿಬ್ಬಂದಿ ಮಹಾವಿದ್ಯಾಲಯ ಇವುಗಳಲ್ಲಿ ಅತ್ಯಂತ ಹಳೆಯದು. ಈ ಸಂಸ್ಥೆಗಳು ಸ್ಟೇಟ್ ಬ್ಯಾಂಕ್ ಗುಂಪಿನ ಸಿಬ್ಬಂದಿಗೆ ತರಬೇತಿ ನೀಡುವುದಲ್ಲದೆ ಅವಶ್ಯಕತೆ ಇದ್ದಾಗ ಇತರ ದೇಶೀಯ/ ವಿದೇಶೀ ಸಂಸ್ಥೆಗಳ ಸಿಬ್ಬಂದಿಗೂ ತರಬೇತಿ ನೀಡುತ್ತವೆ.  ಇದರ ಜತೆಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಸಂಗತಿಗಳ ಅಧ್ಯಯನ, ಸಂಶೋಧನೆ ಮತ್ತು ಪುಸ್ತಕಗಳ ಪ್ರಕಟಣೆಯ ಕಾರ್ಯವನ್ನೂ ಈ ಸಂಸ್ಥೆಗಳು ಮಾಡುತ್ತಿವೆ.

ಕಾರ್ಯ ಸಾಧನೆಯ ಅಂಕಿ ಅಂಶಗಳು

2004-05 ರ ಸಾಲಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಹಾಗೂ ಸ್ಟೇಟ್ ಬ್ಯಾಂಕ್ ಗುಂಪಿನ ಕಾರ್ಯಸಾಧನೆಯ ಸಂಕ್ಷಿಪ್ತ ವಿವರಗಳನ್ನು ಈ ಮುಂದೆ ಕಾಣಿಸಲಾಗಿದೆ: 
		             ಭಾರತೀಯ ಸ್ಟೇಟ್ ಬ್ಯಾಂಕ್   ಸ್ಟೇಟ್ ಬ್ಯಾಂಕ್ ಗುಂಪು    
ಪಾವತಿಯಾದ ಬಂಡವಾಳ [ಕೋಟಿ ರೂ.]      		526.3                526.3
ಬಂಡವಾಳ ಮತ್ತು ಮೀಸಲು[ಕೋಟಿ ರೂ.]           24,072               32,551   
ಠೇವಣಿಗಳು          [ಕೋಟಿ ರೂ.]       	  3,67,048             5,06,105            
ಮುಂಗಡಗಳು        [ಕೋಟಿ ರೂ.]           2,02,374              2,86,986
ವಿನಿಯೋಜನೆಗಳು      [ಕೋಟಿ ರೂ.]          1,97,097              2,61,962
ಒಟ್ಟು ಆಸ್ತಿಗಳು       [ಕೋಟಿ ರೂ.]           4,59,882              6,28,577
ಬಡ್ಡಿ ಆದಾಯ        [ಕೋಟಿ ರೂ.]            32,428               44,499  
ಬಡ್ಡೀತರ ಆದಾಯ     [ಕೋಟಿ ರೂ.]             7,120               10,036
ಒಟ್ಟು ಆದಾಯ        [ಕೋಟಿ ರೂ.]           39,548               54,535
ಒಟ್ಟು ಖರ್ಚು         [ಕೋಟಿ ರೂ.]           35,243               48,938
ನಿವ್ವಳ ಲಾಭ         [ಕೋಟಿ ರೂ.]             4,305                5,597   
ಪ್ರತಿ ಷೇರಿಗೆ ಗಳಿಕೆ          [ರೂ.]              8,1.79                 --
ಸರಾಸರಿ ಆಸ್ತಿಗಳ ಮೇಲಿನ ಆದಾಯ(ಆರದದ ಒ ಎ ಎ)  0.99                --
ಬಂಡವಾಳದ ಮೇಲಿನ ಆದಾಯ (%)              18.10                --
ದೇಶೀಯ ಶಾಖೆಗಳ ಸಂಖ್ಯೆ                     9041               13579
ವಿದೇಶೀ ಶಾಖೆಗಳು / ಕಚೇರಿಗಳು                   52                  52                  
ಬಂಡವಾಳ ಪರ್ಯಾಪ್ತತಾ ಅನುಪಾತ (ಸಿ ಎ ಆರ್) (%)  12.45                ---
ನಿವ್ವಳ ನಿಷ್ಕ್ರಿಯ ಆಸ್ತಿಗಳು  (%)                                     2.65                ---

                                      [ಭಾರತೀಯ ಸ್ಟೇಟ್ ಬ್ಯಾಂಕಿನ ವಾರ್ಷಿಕ ವರದಿಗಳು ಮತ್ತಿತರ ಮೂಲಗಳಿಂದ]

ಬ್ಯಾಂಕಿನ ಅಂತರಜಆಲ ತಾಣದ ವಿಳಾಸ :    	
                               	www.statebankofindia.com   ಮತ್ತು www.sbi.co.in
					        		(ಬಿ.ಎಸ್. ಚಂದ್ರಶೇಖರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ